ಕಥೆ ಸಾರಾಂಶ ಹೀಗಿದೆ ಆನಂದ್ ಹಾಗೂ ಚಿತ್ರ ಗಂಡ ಹೆಂಡತಿ. ಆನಂದ ನಿಗೆ ಹುಡುಗಿಯರ ಹುಚ್ಚು. ಚಿತ್ರಳಿಗೆ ಆನಂದನ ಮೇಲೆ ಸದಾ ಒಂದು ಕಣ್ಣು. ಚಿತ್ರ ತನ್ನ ತವರಿಗೆ ಹೋಗುವ ಪ್ರಸಂಗ ಬರುತ್ತದೆ. ಅವಳನ್ನು ಕಾರಿನಲ್ಲಿ ಬಿಟ್ಟು ಬರುವಾಗ ಆಕಸ್ಮಿಕವಾಗಿ ರೂಪ ಎಂಬ ಗರ್ಭಿಣಿ ಕಾರಿನಲ್ಲಿ ಕೂತು ಮನೆಗೆ ಬರುತ್ತಾಳೆ. ಮನೆಯಲ್ಲಿ ಹೆರಿಗೆ ಹಾಗೂ ಕೊಲೆ ಆಗುತ್ತದೆ. ಈ ಹಿನ್ನೆಲೆಯಲ್ಲಿ ಆನಂದ್ ಹೇಗೆ ಹೊರಗೆ ಬರುತ್ತಾನೆ ಎಂಬುದು ಮಿಕ್ಕ ಕಥೆ.